ಶಿಲ್ಪಾ ಶೆಟ್ಟಿ ಮಾನ – ದೇಶದ ಅವಮಾನ?

ಶಿಲ್ಪಾ ಶೆಟ್ಟಿಗಾದ ಅವಮಾನ – ದೇಶಕ್ಕೇ ಅವಮಾನವಾಗಿದ್ದು ಹೇಗೆ?    ಪತ್ರಿಕೆ,ಟಿವಿಗಳು ಭಾರತಕ್ಕೇನೋ ಭಾರೀ ಅವಮಾನವಾಗಿದೆ ಅನ್ನೋ ಹಾಗೆ ಬೊಬ್ಬೆ ಹೊಡೆಯುತ್ತಿದ್ದುದು ನೋಡಿ ನನ್ನನ್ನೂ ಇದೇ ಪ್ರಶ್ನೆ ಕಾಡಿತ್ತು.  ಕನ್ನಡಪ್ರಭದ ಈ ಲೇಖನ ಓದಿದ ಮೇಲೆ ಸಮಾಧಾನವಾಯಿತು. ನೀವೂ ಓದಿ ನೋಡಿ.  ಏನನ್ನಿಸಿತು ಹೇಳಿ . “ದೆಹಲಿಯಲ್ಲಿ ಅಡ್ದಾಡುವ ಬೆಂಗಳೂರಿನ ಯುವಕನನ್ನು ತಲೆತಿರುಕನೊಬ್ಬ “ಮದ್ರಾಸೀ”  ಎಂದು ಕರೆದರೆ ಅದು ರಾಜ್ಯಕ್ಕಾದ ಅವಮಾನ ಎಂದು ಪರಿಗಣಿಸುತ್ತೇವಾ?” – ಲೇಖಕರ  ಈ ಪ್ರಶ್ನೆಯಂತೂ ಬಹಳ ಅರ್ಥಪೂರ್ಣವಾಗಿದೆ. ಲೇಖನದ Read More

ಆತ್ಮಿಕ ಸ್ನಾನ – ಅಂದರೇನು ?

ಆತ್ಮಿಕ ಸ್ನಾನ! ಇತ್ತೀಚೆಗೆ ಒಂದು ಲೇಖನದಲ್ಲಿ ಈ ಪದ ನೋಡಿದೆ. ನಮ್ಮ ಮನೆಯಲ್ಲಿ, ಬೆಳಿಗ್ಗೆಯಿಂದ ಮಟಮಟ ಮಧ್ಯಾಹ್ನದವರೆಗೆ ಒಬ್ಬರಲ್ಲಾ ಒಬ್ಬರು ಬಾವಿ ಕಟ್ಟೆ ಹತ್ತಿರ ದಬದಬ ತಣ್ಣೀರು ಸುರಿದುಕೊಳ್ಳುತ್ತಾ ಮಡಿ ನೀರಿನ ಸ್ನಾನ ಮಾಡುತ್ತಿದ್ದುದು ಗೊತ್ತು. ಇದಾವುದು ಈ ಸ್ನಾನ ? ನನಗಂತೂ ಅರ್ಥವಾಗಲಿಲ್ಲ. ಆತ್ಮಿಕ ಅಂದರೆ ಇದು ಆತ್ಮಕ್ಕೋ,ಆಧ್ಯಾತ್ಮಿಕಕ್ಕೋ ಸಂಬಂಧಿಸಿರಬೇಕೇನೋ ಎಂದುಕೊಂಡೆ. ಕನ್ನಡ ಕಸ್ತೂರಿ, ಬರಹ ನಿಘಂಟುಗಳನ್ನು Read More

ನುಡಿಹಬ್ಬದ ಕೊರಗುಗಳು

ಅನಿವಾಸಿಗಳು ಹಣಕಾಸಿನ ವಿಷಯದಲ್ಲಿ ಭಾಗ್ಯವಂತರೆಂದು ಕರುಬುವವರೇ ಹೆಚ್ಚು.  ಆದರೆ ಕೆಲವು ವಿಷಯಗಳಲ್ಲಿ ಅವರಷ್ಟು ದುರದೃಷ್ಟವಂತರೇ ಇಲ್ಲವೆಂದು ನನ್ನ ಭಾವನೆ.  ಸಡಗರದಲ್ಲಿ, ವೈಭವದ ನಡುವೆ ನಡೆದ ಅಕ್ಕನ ಮಗಳ ಮದುವೆಯನ್ನು ಕಂಪ್ಯೂಟರಿನಲ್ಲಿ ಸ್ಕ್ಯಾನ್ ಆಗಿ ಬಂದ ಚಿತ್ರಗಳ ಮೂಲಕ ಕಂಡು ಸಂಭ್ರಮಪಡುವ ನಮ್ಮ ನಿರಾಸೆ,ನಿಟ್ಟುಸಿರು ಯಾರಿಗೆ ಅರ್ಥವಾಗುತ್ತದೆ? ಅಪ್ಪ,ಅಮ್ಮನ ಶ್ರಾದ್ಧದ ದಿನ ಮನಸ್ಸನ್ನು ಸುತ್ತಿಕೊಳ್ಳುವ ಪಾಪಪ್ರಜ್ಞೆಯಿಂದ ಅಂದು ಊಟ ಬೇಕೆನ್ನಿಸುವುದಿಲ್ಲ. ಹಬ್ಬಹುಣ್ಣಿಮೆಗಳಲ್ಲಂತೂ ಮನಸ್ಸಿನ ಕತ್ತಲೆ Read More

Happy Thanksgiving day!

Happy Thanksgiving weekend 🙂 !! ಇನ್ನೊಂದು ೩-೪ ದಿನ ಅಮೆರಿಕದಿಂದ ಹೊರಡುವ ಬ್ಲಾಗ್‍ಗಳಿಗೆಲ್ಲಾ ರಜ ಅನ್ನಿಸತ್ತೆ. 🙂 ಯಾಕೆಂದರೆ, ಈ ಸಮಯದಲ್ಲಿ ಮನೆಯಲ್ಲಿ ಇರೋರು ಕಡಿಮೆ. ಅಲ್ಲಿ,ಇಲ್ಲಿ, ಗೆಳೆಯರ ಮನೆಗೆ, ಹೊಸ ಹೊಸ ಜಾಗಗಳನ್ನು ನೋಡಲು ಹೋಗುವವರೇ ಹೆಚ್ಚು. ನೀವೆಲ್ಲ ಏನೇನು ಪ್ಲಾನ್ ಮಾಡಿದೀರಿ? ಎಲ್ಲಿಗೆ ಹೋಗ್ತಾ ಇದೀರಿ? ನಾವೇನು ಹಬ್ಬ ಮಾಡಿ, ಟರ್ಕಿ ತಿನ್ನೋದಿಲ್ಲವಾದರೂ,  ಅಮೆರಿಕಕ್ಕೆ ಬಂದಾಗಿನಿಂದ, ನಾವು ತಪ್ಪದೆ Read More