ಹೆಸರುಬೇಳೆಗೆ ಈ ಹೆಸರೇಕೆ?

ಮೇಲೇರಿದ್ದ ಬೇಳೆಗಳ ಬೆಲೆ ಕೆಳಗಿಳಿಯುತ್ತಾ  ಇದೆ. ಈ ಬಾರಿ ಸಮಸ್ಯೆ ಬಿಸಿಬೇಳೆ ಬಾತಿಗೆ ಬೇಕಾದ ತೊಗರಿಬೇಳೆಯದಲ್ಲ. ಹೆಸರುಬೇಳೆಯದು.   ಸುಮ್ಮನೆ ಯೋಚಿಸುತ್ತಿದ್ದೆ .. ಬೇರೆ ಕೆಲಸವಿಲ್ಲದೆ ಅಲ್ಲ 🙂  ಹೆಸರುಬೇಳೆಯ ಹೆಸರು ಮೊದಲು ಹಸಿರುಬೇಳೆ ಎಂದು ಇದ್ದಿರಬಹುದಲ್ಲವೇ? ಏಕೆಂದರೆ ಹೆಸರುಕಾಳಿನ ಬಣ್ಣ ಹಸಿರು.  englishನಲ್ಲಿಯೂ green gram ಅಂದರೆ ಹೆಸರುಬೇಳೆ ತಾನೇ? ನಮ್ಮ ತಮಿಳು ಮಿತ್ರರು ಹೆಸರುಬೇಳೆಗೆ “ಪಚ್ಚ ಪರಪು” ,”ಪಯರ್ Read More

ತೇಲಿದೆ ನೆನಪಿನ ದೋಣಿಯಲಿ…

ಕೆಲಸಗಳ ನಡುವೆ ಸ್ವಲ್ಪ ವಿರಾಮ ದೊರೆತರೂ ಅಂತರ್ಜಾಲಕ್ಕೆ ಬಂದು ಅಮರಿಕೊಳ್ಳುವ ನಾನು ಈಚೆಗೆ ಕೆಲದಿನಗಳಿಂದ ಅಂತರ್ಜಾಲಕ್ಕೆ ಅಪರೂಪವಾಗಿ ಹೋಗಿದ್ದೆ.  ಅದಕ್ಕೆ ನನಗೆ ದೊರಕಿದ್ದ ಪುಸ್ತಕಗಳೇ ಕಾರಣ. ಎಷ್ಟೋ ದಿನಗಳಿಂದ ಓದಬೇಕೆಂದು ಇಟ್ಟುಕೊಂಡಿದ್ದ ಪುಸ್ತಕಗಳನ್ನು ಓದಿ ಮುಗಿಸಿದೆ. (ಅದರಲ್ಲಿ ಬಹುಪಾಲು ಕಡ ತಂದ ಪುಸ್ತಕಗಳಾದ್ದರಿಂದ ಓದಿ ಹಿಂತಿರುಗಿಸಲೇಬೇಕಾದ ಜರೂರು 🙂 )   ಪುಸ್ತಕವನ್ನು ವೇಗವಾಗಿ, ಗಬಗಬನೆ  ಓದುವ ಸ್ವಭಾವ ನನ್ನದಲ್ಲ.  Read More

wordpress – help

ತುಳಸಿವನದಲ್ಲಿ ,ಕಾಮೆಂಟ್ಸ್ moderate ಮಾಡಲು ಶುರುಮಾಡಿದ ಮೇಲೆ spam ಬರುವುದು ನಿಂತಿತ್ತು. ಈಗ ಮತ್ತೆ ಬರತೊಡಗಿವೆ.   ಇದನ್ನು ತಡೆಯೋದು ಹೇಗೆ? (delete ಮಾಡುವುದು ಬಿಟ್ಟು ಬೇರೇನಾದರೂ ಉಪಾಯ) wordpress ಬಳಸಿ ಅನುಭವವಿದ್ದವರು ತಿಳಿಸಿ.

ಟಿಪ್ಪು ವಿವಾದ – ಲೇಖನ ಸುಗ್ಗಿ!

ನೀವು  ಸುದ್ದಿಯ ಹಸಿವಿನವರಾಗಿದ್ದರೆ,  ಡಿ.ಎಚ್.ಶಂಕರ ಮೂರ್ತಿಯವರು ಪ್ರಾರಂಭಿಸಿದ ಟಿಪ್ಪೂ ವಿವಾದದ ಕುರಿತು ,ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರುತ್ತಿರುವ  ಲೇಖನ ಸರಣಿಗಳನ್ನು ಗಮನಿಸಿಯೇ ಇರುತ್ತೀರಿ.  ಕನ್ನಡದ ಪ್ರಮುಖ ಸಾಹಿತಿಗಳು/ವಿದ್ವಾಂಸರಿಗೆ, ತಮ್ಮ ಸತ್ವಪೂರ್ಣ ಲೇಖನಗಳ ಮೂಲಕ. ಒಂದು ಅರ್ಥಪೂರ್ಣ, ಮುಕ್ತ ಸಂವಾದ ನಡೆಸಲು ವಿ.ಕ ವೇದಿಕೆ ಒದಗಿಸಿಕೊಟ್ಟಿದೆ. ಮೊಟ್ಟ ಮೊದಲು ಆಧಾರಗಳ ಕಡತವನ್ನೇ ಹೊತ್ತು ಆಖಾಡಕ್ಕಿಳಿದಿದ್ದು ಎಸ್.ಎಲ್.ಭೈರಪ್ಪನವರು. (ಚಿದಾನಂದ ಮೂರ್ತಿ, ಸೂರ್ಯನಾಥ್ ಕಾಮತ್ ಲೇಖನಗಳು ಈ ಮುಂಚೆ ಪ್ರಕಟವಾಗಿವೆ.)  Read More

ಎಲ್ಲರಿಗೂ ದಸರ ಹಬ್ಬದ ಶುಭಾಶಯಗಳು!

ನಿಮಗೆಲ್ಲರಿಗೂ ದಸರ ಹಬ್ಬದ ಹಾರ್ದಿಕ ಶುಭಾಶಯಗಳು! ಈ ಬ್ಲಾಗಿನಲ್ಲಿ ವಿಜಯದಶಮಿ ಹಬ್ಬದ ಬಗೆಗೆ ಮಾತಾಡಿಕೊಂಡಿದ್ದಾರೆ. ನನಗೂ ಅಷ್ಟೇ.  ವಿಜಯದಶಮಿಯನ್ನೂ ಸೇರಿಸಿಕೊಂಡ ದಸರಾ ಹಬ್ಬವೇ ತುಂಬಾ ಇಷ್ಟ. ಇದು ಎಲ್ಲಾ ಹಬ್ಬಗಳಂತಲ್ಲದೆ ನಮ್ಮ ಭಾವನೆಗಳೊಡನೆ ಬೆಸೆದುಕೊಂಡಿರುವ ಹಬ್ಬ. ನಮ್ಮ ನಾಡು-ನುಡಿಗಳೊಂದಿಗೆ  ಗುರುತಿಸಿಕೊಂಡಿರುವ ಹಬ್ಬ.  ಕುಲದೇವರಾದ ತಿರುಪತಿ ತಿಮ್ಮಪ್ಪನ ಮದುವೆ ನಡೆದಿದ್ದು ಈಗಲೇ ಎಂಬುದು ನಮ್ಮ ಮನೆಯಲ್ಲಿ ಗರಿಗೆದರುತ್ತಿದ್ದ ಸಂಭ್ರಮಕ್ಕೆ ಮತ್ತೊಂದು ಕಾರಣ.  ಹತ್ತು ದಿನವೂ ನಿರಂತರವಾಗಿ ಉರಿಯುವ ತುಪ್ಪದ ದೀಪಗಳು, Read More