ಗಗನದಿ ಸಾಗಿವೆ – ಚೆನ್ನವೀರ ಕಣವಿ

ಕವನ : ಗಗನದಿ ಸಾಗಿವೆ ಕವಿ : ಚೆನ್ನವೀರ ಕಣವಿ ಗಗನದಿ ಸಾಗಿವೆ ಬಾಗಿವೆ ಮೋಡ ಹೋಗಿದೆ ನೀರನು ಸುರಿದು; ಬರುವುವು, ಬಂದೇ ಬರುವುದು ನೋಡ ತುಂಬಿಸಿ, ತುಳುಕಿಸಿ ಹರಿದು. ಇಳೆಗೂ ಬಾನಿಗು ಮಳೆ ಜೋಕಾಲಿ ತೂಗಿದೆ, ತಂಗಿದೆ ಚೆಲುವು; ಹಸುರೇ ಹಬ್ಬಿದೆ, ಹಸುರೇ ತಬ್ಬಿದೆ ಹೆಸರಿಗು ಕಾಣದು ನೆಲವು. ನಸುಕೋ, ಸಂಜೆಯೊ, ಮಿಸುಕದು ಬೆಳಕು, Read More

ಭೂಮಿಗೆ

ಎದೆಯು ಬಿರಿದು ಪದವು ಕುಸಿಯೆ ತಬ್ಬಿ ಹಿಡಿದ ತಾಯಿಯೆ ಬೇರುಗಳಲಿ ಜೀವ ತುಂಬಿ ಚಿಗುರ ಪೊರೆದ ಮಾಯೆಯೆ ಹೂವು ಕೊಟ್ಟು ಹಣ್ಣು ಕೊಟ್ಟು ಉಪಚರಿಸಿದ ಮಮತೆಯೆ ಮುತ್ತು ರತ್ನ ವಜ್ರ ಖಚಿತ ಖ್ಯಾತಿವೆತ್ತ ಘನತೆಯೆ ಭೂರಮಣರೆಂದು ಮೆರೆದ ಸಾಮ್ರಾಟರ ಹುಟ್ಟಗಿಸಿ ಹೊಟ್ಟೆಲಿಟ್ಟ ರಾಣಿಯೆ ದೈತ್ಯ ವೃಕ್ಷ ಬಿಳಿಲುಗಳೇ ನಿನ್ನ ಹರವಿಕೊಂಡ ವೇಣಿಯೆ? ಕಾಡಿಬೇಡಿ ಬಂದವರಿಗೆ ನೀಡಲೆಂದೇ Read More

ದಾಸೋಹಂ ತವ ದಾಸೋಹಂ

ದಾಸೋಹಂ ತವ ದಾಸೋಹಂ ತವ ದಾಸೋಹಂ ತವ ದಾಸೋಹಂ ||ಪಲ್ಲವಿ|| ವಾಸುದೇವ ವಿಗತಾಘಸಂಘ ತವ ||ಅನು ಪಲ್ಲವಿ|| ಜೀವಾಂತರ್ಗತ ಜೀವ ನಿಯಾಮಕ ಜೀವ ವಿಲಕ್ಷಣ ಜೀವನದ ಜೀವಾಧಾರಕ ಜೀವರೂಪಿ ರಾ- ಜೀವ ಭವಜನಕ ಜೀವೇಶ್ವರ ತವ ||೧|| ಕಾಲಾಂತರ್ಗತ ಕಾಲನಿಯಮಕ ಕಾಲಾತೀತ ತ್ರಿಕಾಲಜ್ಞ ಕಾಲ ಪ್ರವರ್ತಕ ಕಾಲನಿವರ್ತಕ ಕಾಲೋತ್ಪಾದಕ ಕಾಲಮೂರ್ತಿ ತವ ||೨|| ಕರ್ಮಕರ್ಮಕೃತ ಕರ್ಮಕೃತಾಗಮ Read More

ತಿಳಿಯದೋ ನಿನ್ನಾಟ, ತಿರುಪತಿಯ ವೆಂಕಟ!

ರಚನೆ : ವ್ಯಾಸವಿಠಲ ಗಾಯಕ : ರಾಯಚೂರು ಶೇಷಗಿರಿದಾಸ್ ಹಾಡು ಕೇಳಿ ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ ||ಪಲ್ಲವಿ|| ಪೊಳೆವ ನೀರೊಳು ಗೆಲುವ ಮೋರೆಯ ನೆಲವ ನೋಡುವ ಸುಳಿವ ಕಂಬದಿ ಇಳೆಯನಳೆಯುವ ಭಳಿರೆ ಭಾರ್ಗವ ಖಳನ ಛೇಧಿಸಿ ಕೊಳಲ ಧ್ವನಿಗೆ ನಳಿನಮುಖಿಯರ ನಾಚಿಸುವ ಬಲು ಹಯದಳದ ಬಹು ಹವಣೆಗಾರನೆ ||ಅನು|| ಆರು ಬಲ್ಲರು ನಿಮ್ಮ ಶ್ರೀ Read More

ಸ್ತ್ರೀ – ಜಿ.ಎಸ್.ಶಿವರುದ್ರಪ್ಪ

ಕವಿ – ಜಿ.ಎಸ್.ಶಿವರುದ್ರಪ್ಪ ಗಾಯಕ – ಸಿ. ಅಶ್ವಥ್ ಹಾಡು ಕೇಳಿ ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ? ಹಸುರನುಟ್ಟ ಬೆಟ್ಟಗಳಲಿ ಮೊಲೆಹಾಲಿನ ಹೊಳೆಯನಿಳಿಸಿ ಬಯಲ ಹಸುರ ನಗಿಸಿದಾಕೆ ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ? ಮರ Read More