ಭಾಗ – 9

ಜಗತ್ತನ ಎಲ್ಲಾ ಪ್ರಮುಖ ನಗರಗಳ ಲೋಕಲ್ ನ್ಯೂಸ್ ಪೇಪರ್ ಗಳನ್ನು ವಾರಾಂತ್ಯದಲ್ಲಿ ಗಮನಿಸುವುದು ಜೋಯಿಯ ಅಭ್ಯಾಸ.ಪ್ರಪಂಚವೇ ಹಳ್ಳಿಯಂತಾಗಿರುವ ಈ ಕಾಲದಲ್ಲೂ ಲೋಕಲ್ ಗೌರ್ನಮೆಂಟ್ ಗಳ ಸಣ್ಣಸಣ್ಣ ನಿರ್ಧಾರಗಳೂ ಕೆಲವೊಮ್ಮೆ ಗ್ಲೋಬಲ್ ಮಟ್ಟದಲ್ಲಿ ಬಿಸಿನಿಸ್ಸನ್ನು ಬದಲಾಯಿಸಲು ಶಕ್ತವೆಂದು ಜೋಯಿ ನಂಬುತ್ತಾನೆ.ಅವನ ಈ ಅಭ್ವಾಸ ಹಲವು ಬಾರಿ ಅವನಿಗೆ ಲಾಭ ಮಾಡಿಕೊಟ್ಟಿದೆ ಮತ್ತು ಅವತ್ತೂ ಹಾಗೇ ಆಯಿತು. ಬ್ಯಾಂಕಾಕ್ Read More

ಭಾಗ – 8

ಮಧ್ಯಾಹ್ನದ ಹೊತ್ತು ಸಣ್ಣ ನಿದ್ದೆ ತೂಗುತ್ತಿದ್ದ ಶಾರದಮ್ಮನವರಿಗೆ ಪಕ್ಕದ ಮನೆಯ ಹುಡುಗ ಓಡೋಡಿ ಬಂದು ತೇಕುತ್ತಾ ಹೇಳಿದ ಸುದ್ದಿ ದಿಗಿಲು ಹುಟ್ಟಿಸಿತ್ತು. “ದೊಡ್ಡಮ್ಮಾ, ಪೇಟೆಯಲ್ಲಿ ಎಲ್ಲ ಮಾತಾಡ್ತಿದ್ದಾರೆ, ವಲ್ಲೀ ಅಕ್ಕನಿಗೆ ತೊಂದರೆ ಆಗ್ತಿದೆಯಂತೆ. ಅವ್ಳ ಹಾಸ್ಟೆಲ್ ಹೊರಗೆ ರೌಡಿಗಳಿದಾರಂತೆ. ಅವ್ಳು ಯಾರೋ ಮಂತ್ರಿ ಜೊತೆ ಮಾತಾಡಕ್ಕೆ ಅವ್ಳ ಫ್ರೆಂಡ್ ಜೊತೆ ಹೋಗಿದ್ದು ಸರಿಯಲ್ವಂತೆ. `ಇನ್ನು ಅವ್ಳ Read More

ಕಥೆ ಬಗ್ಗೆ ಮಾತಾಡಲು ಈ ಎಳೆ

ಹೊಸ ಕಥೆ ಬರೆಯೋಣವೇ? ಎಂದು ಅನೇಕರು ಉತ್ಸಾಹದಿಂದ ಕೇಳಿಕೊಂಡಿದ್ದಕ್ಕಾಗಿ ಇನ್ನೊಂದು ಹೊಸ ಕಥೆಯನ್ನು ಪ್ರಾರಂಭಿಸಿದ್ದೇನೆ. ಅರ್ಧಕ್ಕೆ ಕೈಕೊಟ್ಟು ಓಡಿ ಹೋಗುವುದಿಲ್ಲವೆಂದು ಕೆಲವರು ಭರವಸೆಯನ್ನೂ ನೀಡಿದ್ದಾರೆ. 🙂 ಈ ಬಾರಿ ಕಥೆ ತ್ರಿಕೋನ ಪ್ರೇಮದ ಜಾಡು ಹಿಡಿದು ಹೋಗದಂತೆ, ಹೊಸ ದಾರಿಯಲ್ಲಿ ತೆಗೆದುಕೊಂಡು ಹೋಗಲು ಪ್ರಯತ್ನಿಸೋಣ. ಎಂದಿನಂತೆ ಕತೆ ಬರೆಯಲು ಒಂದು ದಾರ. ಕಥೆಯ ಬಗ್ಗೆ ಚರ್ಚಿಸಲು Read More

ಭಾಗ-7

ಕಾಂತಿ ಕೋಪದಿಂದ ಧುಮುಗುಟ್ಟುತ್ತಾ ರೂಮಿಗೆ ಬಂದಾಗ ಪ್ರವಲ್ಲಿಕಾ ಅಕ್ಕ ಧಾರಿಣಿಗೆ ತಾನು ಭರತಖಾನನ ಬಂಧನದಿಂದ ತಪ್ಪಿಸಿಕೊಂಡು ಬಂದ ಕಥೆಯನ್ನು ಬಣ್ಣಬಣ್ಣವಾಗಿ ಹೇಳಿ ಮುಗಿಸುತ್ತಿದ್ದಳು. ಧಾರಿಣಿ ಇವರುಗಳ ರೂಮಿನಲ್ಲೇ `ಗೆಸ್ಟ್’ಎಂದು ಇರುವುದಾದ್ದರಿಂದ ಧಾರಿಣಿಗೂ ಕಾಂತಿಗೂ ಕೆಲವೇ ಸಮಯದಲ್ಲಿ ಚೆನ್ನಾದ ಸ್ನೇಹ ಬೆಳೆದಿತ್ತು…ಕಾಂತಿ ಪ್ರವಲ್ಲಿಕಾ ತರ `ಪುಕ್ಕಲು ಪಾರ್ಟಿ’ಅಲ್ಲ ಧಾರಿಣಿಯಷ್ಟಲ್ಲದಿದ್ದರೂ ತಕ್ಕಷ್ಟು ಧೈರ್ಯವಂತೆ ಜೊತೆಗೆ ಅನ್ಯಾಯ ಕಂಡರೆ ಸಿಡಿದು Read More

ಭಾಗ – 6

ಶಾರದಮ್ಮನರಿಗೆ ಧಾರಿಣಿ ಗಂಡನನ್ನು ಅಮೆರಿಕದಲ್ಲಿಯೇ ಬಿಟ್ಟು ಬೆಂಗಳೂರಿಗೆ ಹಿಂತಿರುಗಿದ್ದು ಹಿಡಿಸಲಿಲ್ಲ. ಧಾರಿಣಿ ಏನೇ ಕಾರಣ ಹೇಳಿದರೂ ಅವರಿಗೆ ಅದು ಒಪ್ಪಿಗೆಯಾಗಲಿಲ್ಲ. ಮಗನಂತೂ ತಮ್ಮ ಕೈಬಿಟ್ಟುಹೋಗಿದ್ದಾಯಿತು, ಹೆಣ್ಣು ಮಕ್ಕಳಾದರೂ ಸಂಸಾರ ಮಾಡಿಕೊಂಡು ನೆಮ್ಮದಿಯಾಗಿರಲಿ ಎಂದು ಅವರ ಆಸೆಯಾಗಿತ್ತು. ಆದರೆ ಧಾರಿಣಿ ಯಾರ ಮಾತನ್ನು ಕೇಳುವವಳಲ್ಲವೆಂದು ಅವರಿಗೆ ತಿಳಿದಿತ್ತು. ಶಾಸ್ತ್ರಿಗಳು ಮಗನ ಸಾವಿನ ಸುದ್ದಿ ಕೇಳಿದಾಗಿನಿಂದ ಕುಸಿದುಹೋಗಿದ್ದವರು ಚೇತರಿಸಿಕೊಂಡಿರಲೇ Read More